Saturday, March 1, 2008

ಕ್ರಿಕೆಟಿಗರ ಪರಿಚಯ..

1} ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ಭಾರತ (IND)
ಅನಿಲ್ ಕುಂಬ್ಳೆ
ಬ್ಯಾಟಿಂಗ್ ರೀತಿಬಲಗೈ ಬ್ಯಾಟ್ಸ್‍ಮನ್
ಬೌಲಿಂಗ್ ರೀತಿಬಲಗೈ ಲೆಗ್-ಬ್ರೇಕ್ ಬೌಲರ್
ಟೆಸ್ಟ್‍ಗಳುಒಂದುದಿನದ ಪಂದ್ಯಗಳು
ಪಂದ್ಯಗಳು೧೧೦೨೬೪
ಒಟ್ಟು ರನ್ನುಗಳು೨೦೨೫೯೩೦
ಬ್ಯಾಟಿಂಗ್ ಸರಾಸರಿ೧೭.೫೧೧೦.೯೪
೧೦೦/೫೦- / ೪- / -
ಅತಿಹೆಚ್ಚು ಸ್ಕೋರ್೮೮೨೬
ಚೆಂಡುಗಳುಓವರುಗಳು ಬೌಲ್ ಮಾಡಿದ ಚೆಂಡುಗಳು೩೪೮೯೦೧೪೧೧೭
ವಿಕೆಟುಗಳು೫೩೩೩೨೯
ಬೌಲಿಂಗ್ ಸರಾಸರಿ೨೮.೭೫೩೦.೭೬
ವಿಕೆಟುಗಳು ಇನ್ನಿಂಗ್ಸ್ ನಲ್ಲಿ೩೩
೧೦ವಿಕೆಟುಗಳು ಇನ್ನಿಂಗ್ಸ್ ನಲ್ಲಿ-
ಶ್ರೇಷ್ಠ ಬೌಲಿಂಗ್೧೦/೭೪೬/೧೨
ಕ್ಯಾಚುಗಳು/ಸ್ಟಂಪಿಂಗ್‍ಗಳು೫೦/-೮೪/-


ಅನಿಲ್ ರಾಧಾಕೃಷ್ಣ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) - ಭಾರತದ ಕ್ರಿಕೆಟ್ ಆಟಗಾರ ಮತ್ತು ಭಾರತ ಕ್ರಿಕೆಟ್ ತಂಡದ ಸದಸ್ಯ ೧೯೯೦ರಿಂದ.
ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.
*..ಕ್ರಿಕೆಟ್ ಜೀವನ
ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್‌ ಆಗಿ ಉಳಿದಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ.
ವರ್ಷಗಳ ಪ್ರಕಾರ ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ
ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು.
*ವಿಶ್ವದಾಖಲೆ
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ.
*ಮೈಲಿಗಲ್ಲುಗಳು
ಡಿಸೆಂಬರ್ ೧೦, ೨೦೦೪ - ಕಪಿಲ್ ದೇವ್ ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್‍ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
ಮಾರ್ಚ್ ೧೧, ೨೦೦೬ - ೫೦೦ ಟೆಸ್ಟ್ ವಿಕೆಟುಗಳ ಸಾಧನೆ
ಜೂನ್ ೧೧, ೨೦೦೬ - ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಷ್ ಅವರ ೫೨೦ ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
*..ಜುಂಬೋ (Jumbo)
ಅನಿಲ್ ಕುಂಬ್ಳೆ ಜುಂಬೋ("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ.
ಪ್ರಶಸ್ತಿ ಪುರಸ್ಕಾರಗಳು
೧೯೯೬ - ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ
೨೦೦೫ - ಭಾರತ ಸರಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ.
ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ


2} ಜಾವಗಲ್ ಶ್ರೀನಾಥ್
ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು.ಕ್ರೀಡಾಭಿಮಾನಿಗಳ ಪಾಲಿಗೆ 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಖ್ಯಾತರಾದವರು.
ಮೈಸೂರಿನಲ್ಲಿ ಜನಿಸಿದ ಶ್ರೀನಾಥ್ ,ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು.ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಇವರು, ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪ೦ದ್ಯವನ್ನೂ ಇದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿ೦ಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿ೦ಗ್ ಮೊದಲಾದ ಬೌಲಿ೦ಗ್ ಶೈಲಿಗಳನ್ನು ಅಳವಡಿಸಿಕೊ೦ಡ ಶ್ರೀನಾಥ್, ಟೆಸ್ಟ್ ಪ೦ದ್ಯಗಳಲ್ಲಿ ೨೩೬ ಮತ್ತು ಏಕದಿನ ಪ೦ದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ.
ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ,
ಕರ್ನಾಟಕದಿ೦ದ ರಣಜಿ ಕ್ರಿಕೆಟ್ ಮತ್ತು ಇ೦ಗ್ಲೆ೦ಡ್ ನ ಕೌ೦ಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ಷೈರ್ ಮತ್ತು ಲೀಸೆಸ್ಟರ್‍ಷೈರ್ ತ೦ಡಗಳ ಪರವಾಗಿ ಆಡಿದ್ದಾರೆ.
ಕೆಲವೊಮ್ಮೆ ಉತ್ತಮ ಬ್ಯಾಟಿ೦ಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪ೦ದ್ಯಗಳಲ್ಲಿ "ಪಿ೦ಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉ೦ಟು!

*..ಪ್ರಶಸ್ತಿ /ಪುರಸ್ಕಾರಗಳು
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ 'ಮ್ಯಾಚ್ ರೆಫರಿ' ಎಂದು ಮಾನ್ಯ ಮಾಡಿದೆ.
ಅರ್ಜುನ ಪ್ರಶಸ್ತಿ.


ನನ್ನ ಪಾಲಿನ ದೇವರು. ಅಂದ್ರು ಪರವಾಗಿಲ್ಲ....ಜಾವಾಗಲ ಶ್ರೀನಾಥ ನಮ್ಮಂಥ ಹಳ್ಳಿಗರಿಗೆ ಸ್ಪುರ್ಥಿಯ ಸೆಲೆ...ಈ ಮೈಸೂರ್ ಎಕ್ಸ್ಪ್ರೆಸ್...

3}ರಾಹುಲ್ ದ್ರಾವಿಡ್

ಜನನ ಮತ್ತು ಬಾಲ್ಯ
ರಾಹುಲ್ ದ್ರಾವಿಡ್ ಮಧ್ಯಪ್ರದೇಶಇಂದೋರಿನಲ್ಲಿ , ೧೯೭೩ಜನವರಿ ೧೧ರಂದು ಜನಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್‌ನಲ್ಲಿ. ಅಡ್ಡ ಹೆಸರು - 'ಜ್ಯಾಮ್ಮಿ'.
ಕ್ರಿಕೆಟ್..
೧೯೯೬ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. ಕೆಕಿ ತಾರಾಪೊರ್‌ರವರ ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ "ದ ವಾಲ್" (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೧೭ ಶತಕಗಳು (ಸರಾಸರಿ ೫೮ರಲ್ಲಿ) ಇವೆ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು.
ಭಾರತ ಹಾಗೂ ಕರ್ನಾಟಕಕ್ಕೆ ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ ಸ್ಕಾಟ್ಲ್ಯಾಂಡ್‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ೧೯೯೬ರ ಇಂಗ್ಲೆಂಡ್‌ ಪ್ರವಾಸದ ಎರಡನೆಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.
೨೦೦೪ ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ೨೦೦೪, ಸೆಪ್ಟೆಂಬರ್ ೭ರಂದು ಇವರಿಗೆ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರನೆಂದೂ ಗೌರವಿಸಿತು. ೨೦೦೪ರಲ್ಲಿ ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ ಸೌರವ್ ಗಂಗೂಲಿ ಇಲ್ಲದಿರುವಾಗ ಭಾರತ ತಂಡದ ನಾಯಕತ್ವ ವಹಿಸಿದ್ದರು.
೨೦೦೫ರಲ್ಲಿ ಭಾರತದ ನಾಯಕತ್ವವಹಿಸಿಕೊಂಡ ಇವರು, ಶ್ರೀಲಂಕಾ ವಿರುದ್ಧ ಸರಣಿ ಜಯ ಪಡೆದು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.